ಯುತಿ - ಇದು ಸ್ಥಾನಿಕ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಉಪಯೋಗಿಸಲಾಗುವ ಒಂದು ಪದ. ಇದರರ್ಥವೇನೆಂದರೆ, ಒಂದು ನಿಗದಿತ ಸ್ಥಳದಿಂದ (ಸಾಮಾನ್ಯವಾಗಿ ಭೂಮಿಯಿಂದ) ನೋಡಿದಾಗ, ಎರಡು ಆಕಾಶಕಾಯಗಳು ಆಗಸದಲ್ಲಿ ಪರಸ್ಪರ ಒಂದರ ನಿಕಟದಲ್ಲಿ ಇನ್ನೊಂದು ಇರುವಂತೆ ಕಾಣುವುದು. ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಯುತಿಯನ್ನು ಈ ಚಿಹ್ನೆಯಿಂದ ತೋರಿಸಲಾಗುತ್ತದೆ. == ಹತ್ತಿರದಲ್ಲಿ ಹಾದುಹೋಗುವುದು == ಸಾರ್ವತ್ರಿಕವಾಗಿ ಎರಡು ಗ್ರಹಗಳ ಸನ್ನಿವೇಶದಲ್ಲಿ ಹತ್ತಿದರ ಹಾಯುವಿಕೆಯೆಂದರೆ ಅವೆರಡೂ ಒಂದೇ ವಿಷುವದಂಶವನ್ನು (ಆದ್ದರಿಂದ ಒಂದೇ ಘಂಟಾ ಕೋನವನ್ನು) ಹೊಂದಿವೆ ಎಂದರ್ಥ. ಆದರೆ, ಕ್ರಾಂತಿವೃತ್ತೀಯ ರೇಖಾಂಶದ ಯುತಿ ಆಗುವುದೂ ಉಂಟು. ಈ ರೀತಿಯ ಯುತಿಯಲ್ಲಿ ಎರಡು ಕಾಯಗಳೂ ಒಂದೇ ಕ್ರಾಂತಿವೃತ್ತೀಯ ರೇಖಾಂಶವನ್ನು ಹೊಂದಿರುತ್ತವೆ. ವಿಷುವದಂಶದ ಯುತಿ ಮತ್ತು ಕ್ರಾಂತಿವೃತ್ತೀಯ ರೇಖಾಂಶದ ಯುತಿಗಳು ಸಮಾನ್ಯವಾಗಿ ಒಂದೇ ಸಮಯದಲ್ಲಿ ಆಗದಿದ್ದರೂ, ಬಹುತೇಕ ಸನ್ನಿವೇಶಗಳಲ್ಲಿ ಇವೆರಡೂ ಸ್ವಲ್ಪವೇ ಕಾಲಾವಧಿಯ ನಡುವೆ ಆಗುತ್ತವೆ. ಆದರೆ, ತ್ರಿಯುತಿಯು ಆದಾಗ, ಕೇವಲ ವಿಷುವದಂಶ ಯುತಿ (ಅಥವಾ ಕೇವಲ ಕ್ರಾಂತಿವೃತ್ತೀಯ ರೇಖಾಂಶದ ಯುತಿ) ಉಂಟಾಗಬಹುದು. ಯುತಿಯ ಸಮಯದಲ್ಲಿ - ಅದು ಯಾವುದೇ ಬಗೆಯ ಯುತಿ ಆಗಿದ್ದರೂ - ಖಗೋಳದಲ್ಲಿನ ಎರಡು ಆಕಾಶಕಾಯಗಳು ಹತ್ತಿರದಲ್ಲಿರುವಂತೆ ಕಾಣುತ್ತವೆ. ಬಹುತೇಕ ಯುತಿಗಳಲ್ಲಿ ಒಂದು ಕಾಯವು ಇನ್ನೊಂದರ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವಂತೆ ಕಾಣುತ್ತದೆ. == ಇನ್ನೂ ಹತ್ತಿರದಲ್ಲಿ ಹಾದುಹೋಗುವುದು == ಆದರೆ, ಎರಡು ಆಕಶಕಾಯಗಳು ವಿಷುವದಂಶದ ಯುತಿಯ ಸಮಯದಲ್ಲಿ ಒಂದೇ ಖಗೋಳ ಅಕ್ಷಾಂಶವನ್ನು ಹೊಂದಿದ್ದರೆ (ಅಥವಾ ಕ್ರಾಂತಿವೃತ್ತೀಯ ರೇಖಾಂಶದ ಯುತಿಯ ಸಮಯದಲ್ಲಿ ಒಂದೇ ಕ್ರಾಂತಿವೃತ್ತೀಯ ರೇಖಾಂಶವನ್ನೂ ಹೊಂದಿದ್ದರೆ), ಭೂಮಿಗೆ ಹತ್ತಿರದಲ್ಲಿರುವ ಕಾಯವು ಇನ್ನೊಂದರ ಮುಂದೆ ಹಾದುಹೋಗುತ್ತದೆ. ಇದನ್ನು ಯುತಿ-ವಿಯುತಿ ಎಂದು ಕರೆಯಲಾಗುತ್ತದೆ. ಒಂದು ಕಾಯವು ಇನೂಂದರ ನೆರಳಿನೊಳಕ್ಕೆ ಹೊಕ್ಕರೆ ಅದನ್ನು ಗ್ರಹಣ ಎನ್ನಲಾಗುತ್ತದೆ. ಉದಾಹರಣೆಗೆ, ಚಂದ್ರನು ಭೂಮಿಯ ನೆರಳಲ್ಲಿ ಕಣ್ಮರೆಯಾದರೆ ಅದನ್ನು ಚಂದ್ರ ಗ್ರಹಣ ಎನ್ನುತ್ತಾರೆ. ಹತ್ತಿರದ ಕಾಯದ ಗೋಚರ ವೃತ್ತವು ದೂರದ ಕಾಯಕ್ಕಿಂತ ಗಮನಾರ್ಹವಾಗಿ ಚಿಕ್ಕದಾಗಿದ್ದರೆ, ಅದನ್ನು ಸಂಕ್ರಮಣ ಎನ್ನುತ್ತಾರೆ. ಬುಧವು ಸೂರ್ಯನ ಮುಂದೆ ಹಾದುಹೋದಾಗ ಬುಧ ಸಂಕ್ರಮಣವಾಗುತ್ತದೆ. ಹತ್ತಿರದ ಕಾಯವು ದೂರದ ಕಾಯಕ್ಕಿಂತ ದೊಡ್ಡದಾಗಿದ್ದಾಗ ಅದು ಚಿಕ್ಕ ಕಾಯವನ್ನು ಸಂಪೂರ್ಣವಾಗಿ ಮರೆಮಾಡುತ್ತದೆ; ಇದಕ್ಕೆ ಮರೆಮಾಡುವಿಕೆ ಎಂದು ಹೆಸರು. ಮರೆಮಾಡುವಿಕೆಯ ಒಂದು ಉದಾಹರಣೆಯೆಂದರೆ (ಸಾಮಾನ್ಯವಾಗಿ ಇದನ್ನು ಗ್ರಹಣ ಎಂದು ತಪ್ಪಾಗಿ ಕರೆಯಲಾಗುತ್ತದೆ) ಚಂದ್ರನು ಭೂಮಿ ಮತ್ತು ಸೂರ್ಯರ ನಡುವೆ ಹಾದುಹೋದಾಗ ಸೂರ್ಯವು ಭಾಗಶಃ ಅಥವಾ ಸಂಪೂರ್ಣವಾಗಿ ಮರೆಯಾಗುತ್ತದೆ. ಬಹುತೇಕ ಮರೆಯಾಗುವಿಕೆಗಳಲ್ಲಿ ದೊಡ್ಡ ಕಾಯವು ಸೂರ್ಯ ಅಥವಾ ಚಂದ್ರವೇ ಆಗಿರುತ್ತವೆ. ಹೀಗಿಲ್ಲದಿರುವ ಮರೆಯಾಗುವಿಕೆಗಳು ಬಹಳ ಅಪರೂಪ. ಆದರೆ, ಚಂದ್ರನಿಂದ ಬೇರಾವುದೋ ಗ್ರಹದ ಮರೆಮಾಡುವಿಕೆಯು ಅಷ್ಟೇನೂ ಅಪರೂಪವಲ್ಲ. ಈ ರೀತಿಯ ಹಲವು ಘಟನೆಗಳನ್ನು ಭೂಮಿಯ ಮೇಲೆ ಹಲವೆಡೆಗಳಿಂದ ಕಾಣಬಹುದು. == ಉಚ್ಚ ಮತ್ತು ನೀಚ ಯುತಿ == ಒಂದು ಉಚ್ಚ ಗ್ರಹದಿಂದ ನೋಡಿದಾಗ, ನೀಚ ಗ್ರಹವೊಂದು ಸೂರ್ಯನ ವಿರುದ್ಧ ದಿಕ್ಕಿನಲ್ಲಿದ್ದರೆ, ಅದು ಸೂರ್ಯನೊಂದಿಗೆ ಉಚ್ಚ ಯುತಿಯಲ್ಲಿದೆ ಎಂದು ಅರ್ಥ. ಎರಡು ಗ್ರಹಗಳು ಸೂರ್ಯನ ಒಂದೇ ಕಡೆ ಇದ್ದಾಗ ನೀಚ ಯುತಿಯು ಆಗುತ್ತದೆ. ನೀಚ ಯುತಿಯಲ್ಲಿ ನೀಚ ಗ್ರಹದಿಂದ ನೋಡಿದಾಗ, ಉಚ್ಚ ಗ್ರಹವು ಸೂರ್ಯನಿಗೆ "ವಿಯುತಿಯಲ್ಲಿ" ಇರುತ್ತದೆ. "ನೀಚ ಯುತಿ" ಮತ್ತು "ಉಚ್ಚ ಯುತಿ" ಎಂಬ ಪದಗಳನ್ನು ವಿಶಿಷ್ಟವಾಗಿ, ಭೂಮಿಗೆ ನೀಚ ಗ್ರಹಗಳಾದ ಬುಧ ಮತ್ತು ಶುಕ್ರ ಗ್ರಹಗಳ ಬಗ್ಗೆ ಉಲ್ಲೇಖಿಸುವಾಗ ಬಳಸಲಾಗುತ್ತದೆ. ಆದರೆ, ಈ ಪದಗಳನ್ನು ಯಾವುದೇ ಎರಡು ಗ್ರಹಗಳಿಗೆ ಬಳಸಬಹುದು. ಭೂಮಿಯಿಂದ ನೋಡಿದಂತೆ ಯಾವುದೇ ಗ್ರಹ (ಅಥವಾ ಕ್ಷುದ್ರ ಗ್ರಹ ಅಥವಾ ಧೂಮಕೇತು) ಸೂರ್ಯನೊಂದಿಗೆ ಯುತಿಯಲ್ಲಿದ್ದಾಗ ಅದನ್ನು ಸರಳವಾಗಿ "ಯುತಿಯಲ್ಲಿದೆ" ಎಂದು ಹೇಳಬಹುದು (ಸೂರ್ಯನೊಂದಿಗೆ ಯುತಿಯಲ್ಲಿದೆ ಎಂದು ಹೇಳುವ ಬದಲು). ಪ್ರತಿ ಅಮಾವಾಸ್ಯೆಯಂದು ಚಂದ್ರವು ಯುತಿಯಲ್ಲಿರುತ್ತದೆ. "ಅರೆ-ಯುತಿ"ಗಳೂ ಆಗಬಹುದು; ಈ ಸನ್ನಿವೇಶದಲ್ಲಿ, ಪ್ರತಿಗಾಮಿ ಚಲನೆಯನ್ನು ಹೊಂದಿರುವ ಒಂದು ಗ್ರಹವು (ಬುಧ ಅಥವಾ ಶುಕ್ರ) ತನ್ನ ವಿಷುವದಂಶದಲ್ಲಿ ನಿಧಾನಗೊಂಡು ಇನ್ನೊಂದು ಗ್ರಹವನ್ನು ತನ್ನನ್ನು ದಾಟಿಹೋಗಲು ಬಿಡುತ್ತದೆ. ಆದರೆ, ದಾಟುವ ಸ್ವಲ್ಪವೇ ಮುನ್ನ ಮುಂಚಿನ ಗ್ರಹವು ಮತ್ತೆ ಚಲಿಸಿ ದೂರ ಹೋಗುತ್ತದೆ. ಇದು ಹಗಲಿಗೆ ಮುಂಚಿನ ಆಗಸದಲ್ಲಿ ಆಗುತ್ತದೆ; ಅಥವಾ ಸಂಜೆಯ ನಂತರದ ಆಗಸದಲ್ಲಿ ಇದರ ವಿರುದ್ಧ ಚಲನೆಯು ಆಗಬಹುದು. ಹೆಚ್ಚಿನ ಸಮಯ, ಈ ರೀತಿಯ ಚಲನೆಗಳು ಬುಧ ಮತ್ತು ಶುಕ್ರ ಗ್ರಹಗಳ ನಡುವೆ ಆಗುತ್ತದೆ, ಮತ್ತು ಈ ಸನ್ನಿವೇಶವು ಉಂಟಾದಾಗ ಇವೆರಡೂ ಹಲವು ದಿನಗಳ ಕಾಲ ಒಂದಕ್ಕೊಂದು ಹತ್ತಿರದಲ್ಲಿ ಇರುವಂತೆ ಕಾಣಬಹುದು. == ದೊಡ್ಡ ಯುತಿಗಳು == === ೨೦೦೭ === ಡಿಸೆಂಬರ್ ೨೦೦೭ ರ ೨೩ ಮತ್ತು ೨೪ರಂದು ಗ್ರಹ/ಬ್ರಹ್ಮಾಂಡಗಳ ಒಂದು ಬಹಳ ಅಪೂರ್ವವಾದ ವಿನ್ಯಾಸವು ಸಂಭವಿಸುತ್ತದೆ. ಈ ೨೩/೧೨ ವಿನ್ಯಾಸ — ಮಂಗಳ, ಭೂಮಿ, ಸೂರ್ಯ, ಬುಧ, ಗುರು, ಕ್ಷೀರ ಪಥದ ಕೇಂದ್ರ - ಇದನ್ನು ಕೆಳಗಿನ ಸಂಪರ್ಕದಲ್ಲಿ ತೋರಿಸಲಾಗಿದೆ; ಡಿಸೆಂಬರ್ ೨೪ರಂದು ಸುಮಾರು ಬೆಳಗಿನ ಜಾವ ೨ ಘಂಟೆಯ ಹೊತ್ತಿಗೆ (ಭಾರತದಲ್ಲಿ ಸುಮಾರು ಬೆಳಿಗ್ಗೆ ೭:೩೦ ರಲ್ಲಿ) ಪೂರ್ಣ ಚಂದ್ರನ ಅಸ್ತಿತ್ವದ ಜೊತೆಯಲ್ಲೇ ಶುಕ್ರ ಮತ್ತು ನೆಪ್ಚೂನ್‌ಗಳು ಕ್ಷೇತ್ರಕಲನದಲ್ಲಿ ಇರುತ್ತವೆ ಎಂಬುದನ್ನು ಪರಿಗಣಿಸಿದರೆ, ಇದು ಮತ್ತಷ್ಟು ಅಪೂರ್ವವಾದ ಘಟನೆಯಾಗುತ್ತದೆ. ಇದಲ್ಲದೆ, ಪ್ಲುಟೊ/ಸೂರ್ಯರ ಯುತಿಯು ಕರಾರುವಾಕ್ಕಾಗಿ ಮಕರಾಯನದಂದೇ ಆಗುತ್ತದೆ. ಇದು ಕ್ಷೀರ ಪಥದ ಕೇಂದ್ರದ ಜೊತೆ ಯುತಿಯ ಸ್ವಲ್ಪವೇ ನಂತರ ನಡೆಯುತ್ತದೆ. ೨೩ ಡಿಸೆಂಬರ್ ೨೦೦೭ರಂದು ಮಂಗಳದಿಂದ ಕ್ಷೀರ ಪಥದ ಕೇಂದ್ರದ ಕಡೆ ಗುರು, ಮಂಗಳ, ಭೂಮಿ, ಬುಧ, ಪ್ಲುಟೊಗಳ ಪಂಕ್ತಿಯ ಒಂದು ನೋಟವನ್ನು ಕೆಳಗಿನ ಸಂಪರ್ಕವು ತೋರಿಸುತ್ತದೆ. ಇದು ೨೩ ನವೆಂಬರ್ ೨೦೦೭ರ ಪ್ಲುಟೊ/ಗುರು (ಸೌರಕೇಂದ್ರಿತ) ಯುತಿಯ ಕೆಲವೇ ದಿನಗಳ ನಂತರ ನಡೆಯುತ್ತದೆ. 23rd 2007 === ೨೦೦೨ === ೨೦೦೨ರ ಏಪ್ರಿಲ್ನಲ್ಲಿ ಒಂದು ಅಪರೂಪವಾದ ದೊಡ್ಡ ಯುತಿಯು ಉಂಟಾಯಿತು; ಇದರಲ್ಲಿ, ಶನಿ, ಗುರು, ಮಂಗಳ, ಶುಕ್ರ ಮತ್ತು ಬುಧ ಗ್ರಹಗಳು ಪಶ್ಚಿಮ-ವಾಯುವ್ಯ ಆಗಸದಲ್ಲಿ ಸೂರ್ಯಾಸ್ತದ ಸ್ವಲ್ಪವೇ ನಂತರ ಒಟ್ಟಿಗೆ ಕಂಡುಬಂದವು; ಈ ರೀತಿಯ ಘಟನೆ ೨೦೬೦ರಲ್ಲಿ ಮತ್ತೊಮ್ಮೆ ಆಗುತ್ತದೆ. ಆದರೆ, ೨೦೬೦ರಲ್ಲಿ ಈ ೫ ಗ್ರಹಗಳು ಸೂರ್ಯೋದಯದ ಮುನ್ನ ಪೂರ್ವ-ಈಶಾನ್ಯ ಆಗಸದಲ್ಲಿ ಕಾಣುತ್ತವೆ. === ೨೦೦೦ === ೨೦೦೦ರ ಮೇ ತಿಂಗಳಲ್ಲಿ ಐದು ಅತಿ ಪ್ರಕಾಶಮಾನವಾದ ಗ್ರಹಗಳು ಭೂಮಿಯಿಂದ ನೋಡಿದಂತೆ ಸೂರ್ಯನ ೨೦°ಗಳ ಒಳಗೆ ಸ್ಥಿತವಾಗಿದ್ದವು. ಇವು ಸೂರ್ಯನ ನಿಕಟದಲ್ಲಿ ಇದ್ದುದ್ದರಿಂದ, ಇವನ್ನು ವೀಕ್ಷಿಸಲಾಗಲಿಲ್ಲ. === ೧೯೮೭ === ಆಗಸ್ಟ್ ೨೪, ೧೯೮೭ರಂದು ಭೂಮಿಗೆ ಅತ್ಯಂತ ಸಮೀಪದ ಐದು ಆಕಾಶಕಾಯಗಳಾದ ಸೂರ್ಯ, ಚಂದ್ರ, ಬುಧ, ಶುಕ್ರ ಮತ್ತು ಮಂಗಳ - ಇವುಗಳು ಪರಸ್ಪರ ಸುಮಾರು ೫°ಗಳ ಅಂತರದಲ್ಲಿ ಸ್ಥಿತವಾಗಿದ್ದವು. ಅಂದು ಸೂರ್ಯಾಸ್ತದ ನಂತರ ಮಂಗಳ, ಶುಕ್ರ, ಬುಧ ಮತ್ತು ಚಂದ್ರರು ಆ ಕ್ರಮದಲ್ಲಿ ೨೦ ನಿಮಿಷಗಳ ಒಳಗೆ ಮುಳುಗಿದವು. ಮೇಲಿನ ೨೦೦೦ದ ಯುತಿಯಂತೆಯೇ, ಈ ಘಟನೆಯಲ್ಲಿ ಸೂರ್ಯನೂ ಭಾಗಿಯಾಗಿದ್ದರಿಂದ ಇದನ್ನು ವೀಕ್ಷಿಸಲಾಗಲಿಲ್ಲ. === ೧೯೬೨ === ಫೆಬ್ರವರಿ ೧೯೬೨ರ ೪-೫ ದಿನಾಂಕಗಳ ಸೂರ್ಯ ಗ್ರಹಣ ಮತ್ತು ಬಾಲ ಚಂದ್ರನು ಇದ್ದ ಸಮಯದಲ್ಲಿ ಅತ್ಯಂತ ಅಪರೂಪವಾದ ಒಂದು ದೊಡ್ಡ ಯುತಿಯು ಉಂಟಾಯಿತು (ಇದು ಬರಿಗಣ್ಣಿಗೆ ಕಾಣುವ ಎಲ್ಲಾ ಐದು ಗ್ರಹಗಳನ್ನು ಮತ್ತು ಸೂರ್ಯ ಚಂದ್ರರನ್ನು ಒಳಗೊಂಡಿತ್ತು). ಇವೆಲ್ಲ ಕ್ರಾಂತಿವೃತ್ತದ ಸಮತಳದಲ್ಲಿ ಪರಸ್ಪರ ೧೬°ಗಳ ಒಳಗಿದ್ದವು. ಸೂರ್ಯ ಗ್ರಹಣದ ನಿಖರ ಸಮಯದಲ್ಲಿ ಐದು ಆಕಾಶಕಾಯಗಳು (ಸೂರ್ಯ, ಚಂದ್ರ, ಬುಧ, ಶುಕ್ರ ಮತ್ತು ಗುರು) ಪರಸ್ಪರ ೩°ಗಿಂತ ಕಡಿಮೆ ಅಂತರದಲ್ಲಿದ್ದು, ಭೂಮಿಯು ಸಹ ಇವುಗಳ ಹತ್ತಿರದಲ್ಲೇ ಇದ್ದಿತು. ಆದರೆ, ಒಟ್ಟಾರೆ ನೋಡಿದಾಗ ಈ ಯುತಿಯು ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಒಳಗೊಂಡಿದ್ದು, ಸೂರ್ಯ ಗ್ರಹಣದ ಸಮಯದಲ್ಲಿ ಭೂಮಿಯು ಸಹ ಸೂರ್ಯ/ಚಂದ್ರರೊಟ್ಟಿಗೆ ಒಂದು ಸಾಲಿನಲ್ಲಿ ಇದ್ದಿತು (ಒಟ್ಟಾರೆ ಎಂಟು ಆಕಾಶಕಾಯಗಳು). == ವಿಷುವದಂಶದ ಯುತಿಗಳು: ೨೦೦೫-೨೦೨೦ == === ೨೦೦೫ === === ೨೦೦೬ === === ೨೦೦೭ === === ೨೦೦೮ === === ೨೦೦೯ === === ೨೦೧೦ === === ೨೦೧೧ === === ೨೦೧೨ === === ೨೦೧೩ === === ೨೦೧೪ === === ೨೦೧೫ === === ೨೦೧೬ === === ೨೦೧೭ === === ೨೦೧೮ === === ೨೦೧೯ === === ೨೦೨೦ ===